ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘ ಮತ್ತು ಹಸಿರು ಸೇನೆಯ ರೈತರಿಂದ ಪ್ರತಿಭಟನೆ..!

ಪಾವಗಡ: ಪಾವಗಡ ಇಂದು ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗುವ ಮೂಲಕ ತಹಶಿಲ್ದಾರರ ನಾಗರಾಜ್ ರವರಿಗೆ ಮನವಿಪತ್ರ ನೀಡಿ ನಂತರ ಮಾದ್ಯಮ ಬಳಿ ಮಾತನಾಡಿದ ತಾಲ್ಲೂಕು ಹಸಿರು ಸೇನೆ ರೈತಸಂಘದ ಅಧ್ಯಕ್ಷ ಪೂಜಾರಪ್ಪ ಈಗಾಗಲೇ ಹಲವು ದಿನಗಳಿಂದ ದೆಹಲಿ ಯಲ್ಲಿ ಹಲವು ರೈತ ಸಂಘಗಳು ಭೂ ಸುಧಾರಣಾ ಕಾಯಿದೆ. ಎಪಿಎಂಸಿ ಕಾಯಿದೆ. ವಿದ್ಯುತ್ ಕಾಯಿದೆ ಹಾಗೂ ಅಗತ್ಯ ವಸ್ತುಗಳ ಕಾಯಿದೆ ಹಿಂಪಡೆಯಬೇಕೆಂದು ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ಕಾರರ ಮೇಲೆ ಜಲಪಿರಂಗಿ ಇತರೆ ಹಿಂಸೆ ನೀಡುತ್ತಿರುವುದು ಮತ್ತು ದೆಹಲಿಯ ಗಡಿ ಭಾಗದಲ್ಲಿ ರೈತರನ್ನು ತಡೆದಿರುವ ಪೋಲಿಸ್ ಇಲಾಖೆಯ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು.ಮತ್ತು ಹಿಡಿ ಮನುಕುಲಕ್ಕೆ ಅನ್ನ ನೀಡುತ್ತಿರುವ ರೈತರ ಬಗ್ಗೆ ಹೇಡಿ ಹೇಳಿಕೆ ನೀಡಿರುವ ರಾಜ್ಯದ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ರವರು ರೈತರಿಗೆ ಕ್ಷಮೆ ಕೋರಬೇಕು ಇಲ್ಲವಾದರೆ ಸಂಪುಟದಿಂದ ವಜಗೋಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ರೈತರಾದ ಶಿವರಾಜು.ವಿಜಯ್ ನರಸಿಂಹ. ನಲಿಗಾನ ಹಳ್ಳಿ ಮಂಜುನಾಥ, ಈರಪ್ಪ, ಅಶ್ವಥಪ್ಪ, ನಡಿಪನ್ನ, ಪೋಜಾರಿ ಚಿತ್ತಯ್ಯ, ಅಂಜಿನಪ್ಪ, ನಾಗಪ್ಪ, ರಾಮಚಂದ್ರಪ್, ಬಾಬು, ನಾರಾಯಣಪ್ಪ, ಸಿದ್ದಪ್ಪ, ಇತರೆ ಹಲವು ಮಂದಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ-ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ

Please follow and like us:

Related posts

Leave a Comment