ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ..!

ಮುಳಬಾಗಿಲು: ಹತ್ತನೇ ತರಗತಿಯಲ್ಲಿ ಶಾಲಾ ವಾರು ಅತಿಹೆಚ್ಚು ಅಂಕಗಳಿಂದ ಉತ್ತೀರ್ಣರಾದ ಬಾಲಕ ,ಬಾಲಕಿಯರಿಗೆ ಕೋಲಾರ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಹೆಚ್. ನಾಗೇಶ್ ಇಂದು ಸನ್ಮಾನ ಮಾಡಿ ಉಡುಗೊರೆ ಜೊತೆಗೆ ಸಿಹಿ ನೀಡಿ ಗೌರವಿಸಿದರು. ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎವಿ ಶ್ರೀನಿವಾಸ್ ಸಾರಥ್ಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಚಿವರ ಜೊತೆ ಸೇರಿ ತಾಲ್ಲೂಕಿನ ಹದಿನಾಲ್ಕು ಶಾಲಾ ಮಕ್ಕಳಿಗೆ ಸನ್ಮಾನ ಮಾಡಲಾಯಿತು. ಇದೇ ‌ರೀತಿ ಅತಿ ಹೆಚ್ಚು ಅಂಕ ಪಡೆದು ತಾಲ್ಲೂಕಿಗೆ, ಹೆತ್ತವರಿಗೆ ಕೀರ್ತಿ ತರಬೇಕು ಎಂದರು. ಹಾಗೂ ಇತರೆ ವಿದ್ಯಾರ್ಥಿಗಳು ಸಹ ಸಾಕಷ್ಟು ಪ್ರಯತ್ನ ಪಟ್ಟು ಉತ್ತೀರ್ಣರಾಗಿದ್ದಾರೆ ಅವರಿಗೂ ಅಭಿನಂದನೆಗಳನ್ನು ಸಚಿವರು ತಿಳಿಸಿದರು. ತಾಲ್ಲೂಕು ಶೈಕ್ಷಣಿಕವಾಗಿ ಬೆಳೆಯುತ್ತಿದೆ. ಅದೇ ರೀತಿ ಮೊನ್ನೆ ತಾನೇ ಯುಪಿಎಸ್‌ಸಿ ಯಲ್ಲಿ ರ್ಯಾಂಕ್ ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ ಅದೇ ರೀತಿ ಇತರೆ ವಿದ್ಯಾರ್ಥಿಗಳು ಪ್ರಯತ್ನ ಪಡಬೇಕು ಎಂದು ಸಚಿವರು ಕರೆ ನೀಡಿದರು.

ವರದಿ-ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು..

Please follow and like us:

Related posts

Leave a Comment