ಹತ್ರಾಸ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ..!

ಅರಕಲಗೂಡು:ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ವಿಕೃತ ರೀತಿ ಕೊಲೆಗೆ ಕಾರಣವಾದ ಕಿಡಿಗೇಡಿಗಳನ್ನು ಗಲ್ಲಿಗೇರಿಸಿ ಎಂದು ತಾಲ್ಲೂಕಿನ ವಿವಿಧ ದಲಿತ ಪರ ಹಾಗೂ ಕರ್ನಾಟಕ ರಕ್ಷಣೆ ವೇದಿಕೆ, ತಾಲ್ಲೂಕು ರೈತ ಸಂಘದ ಸಂಘಟನೆಗಳಿಂದ ಪ್ರತಿಭಟನೆ ಜಾಥ ಹಮ್ಮಿಕೊಳ್ಳಲಾಯಿತು.ಪ್ರತಿಭಟನೆಗಾರರು ಪ್ರವಾಸಿ ಮಂದಿರದಿಂದ ಹೊರಟು ಕೆಲಕಾಲ ಅ.ನ.ಕೃ ವೃತ್ತ ಬಳಿ ರಸ್ತೆ ತಡೆ ಹಾಗೂ ಮನಿಷಾ ವಾಲ್ಮಿಕಿ ಯುವತಿಗೆ ಮೌನ ಆಚರಣೆ ನಡೆಸಿದರು. ನಂತರ ಅತ್ಯಾಚಾರಿಗಳ ವಿರೋಧ ಹಾಗೂ ಉತ್ತರ ಪ್ರದೇಶ ಜನಸಾಮಾನ್ಯರಿಗೆ ರಕ್ಷಣೆ ನೀಡಿರುವ ಬಿಜೆಪಿ ಸರ್ಕಾರದ ವಿರೋಧ ಘೋಷಣೆ ಕೂಗುತ್ತಾ ಜಾಥ ನಡಸಿ ತಾಲ್ಲೂಕು ಕಛೇರಿ ಆವರಣಕ್ಕೆ ತೆರಳಿದರು. ನಂತರ ಮಾತನಾಡಿದ ಪ್ರತಿಭಟನೆ ನೇತೃತ್ವ ವಹಿಸಿದ ರೈತ ಸಂಘದ ಅಧ್ಯಕ್ಷ ಯೋಗೇಶ್ ದೇಶದಲ್ಲಿ ಸರ್ವರಿಗೂ ಸಮಪಾಲು ಎಂದು ಸಂವಿಧಾನ ಆಶಯ ಆದರೆ ದೇಶ ಶ್ರೀಮಂತರಿಗೆ ಬಾಲ್ಯಡರ ಪರವಾಗಿ ಕಾನೂನು ರೂಪಿತಗೊಳ್ಳತ್ತಿದೆ ಸ್ವತಂತ್ರ್ಯಲಭಿಸಿ 74 ವರ್ಷಗಳು ಕಳೆದರೂ ದೇಶದ ಮಹಿಳೆಯರಿಗೆ ಸಮಾನತೆ, ರಕ್ಷಣೆ ,ಗೌರವ ಸಿಗುತ್ತಿಲ್ಲ ಎಂದರು.ಕರವೇ ಮುಖಂಡ ರವಿಕುಮಾರ್ ಮಾತನಾಡಿ ದೇಶದ ಯಾವುದೇ ಹಣ್ಣುಮಗಳಿಗೆ ಅನ್ಯಾಯವಾಗಬಾರದು ಮತ್ತು ಒಂದು ಸಮುದಾಯದ ಹೆಣ್ಣು ಮಗಳು ಎಂದು ಭಿನ್ನ ಬೇಧ ಮಾಡದೇ ಭಾರತೀಯರು ಮನಿಷಾ ವಾಲ್ಮೀಕಿ ಹೆಣ್ಣು ಮಗಳಿಗೆ ಆದ ಅನ್ಯಾಯದ ವಿರೋಧ ಹೋರಾಟ ನಡಸಲಾಗುವುದು ತಪ್ಪಿತಸ್ಥ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ವಿವಿಧ ಸಂಘಟನೆಗಳು ರಾಷ್ಟ್ರಪತಿ ಅವರಿಗೆ ಅತ್ಯಾಚಾರ, ಕೊಲೆ ಪ್ರಕರಣ ಕುರಿತು ವಿರೋಧಿಸಿ ಬರೆದ ಮನವಿ ಪತ್ರವನ್ನು ತಾಲ್ಲೂಕು ದಂಡಾಧಿಕಾರಿ ವೈ ಎಂ ರೇಣುಕುಮಾರ್ ಅವರಿಗೆ ನೀಡಿದರು.ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ವಿವಿಧ ಸಂಘಟನೆಗಳ ಸದಸ್ಯ ಹೋರಾಟವನ್ನು ಸರ್ಕಾರದ ಗಮನಕ್ಕೆ ಪತ್ರ ಮೂಲಕ ತಿಳಿಸಲಾಗುವುದು ಹಾಗೂ ಹೋರಾಟಗಾರ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹೋರಾಟ ನಡಸಬೇಕು ಮತ್ತು ಕೋರೋನಾ ರೋಗವು ದಿನೇದಿನೇ ವ್ಯಾಪಕವಾಗಿ ಹರಡುತ್ತಿದ್ದು ಮುಂಜಾಗ್ರತಾ ಕ್ರಮವನ್ನು ವಹಿಸಿಕೊಳ್ಳಬೇಕು ಆರೋಗ್ಯವಿದ್ದರೆ ಮಾತ್ರ ಹೋರಾಟ, ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ ಎಂದು ಸಲಹೆ ನೀಡಿದರು.ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಘಟನೆಗಳು ಛಲವಾದಿ ಮಹಾ ಸಭಾ,ಕರ್ನಾಟಕ ದಲಿತ ಸಂಘರ್ಷ ಸಮಿತಿ ,ಕರ್ನಾಟಕ ರಕ್ಷಣೆ ವೇದಿಕೆ ,ಸಮ ಸಮಾಜನಿರ್ಮಾಣ ವೇದಿಕೆ, ಅಂತಾರಾಷ್ಟ್ರೀಯ ಮಾನವ ಹಕ್ಕು ಸಮಿತಿ, ದಾರ್ಮಿಕ ಅಲ್ಪಸಂಖ್ಯಾತರ ಒಕ್ಕೂಟ, ಮುಖಂಡರು ಭಾಗಿಯಾಗಿದ್ದರು.

ವರದಿ-ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು

Please follow and like us:

Related posts

Leave a Comment