ಪ್ರಸಿದ್ದ ಕುರುಡುಮಲೆ ವಿನಾಯಕ ದೇಗುಲಕ್ಕೆ ಭೇಟಿ- ರಮೇಶ್ ಬಾಬು..!

ಮುಳಬಾಗಿಲು: ಆಗ್ನೇಯ ಪಧವೀದರರ ಕ್ಷೇತ್ರದ ಚುನಾವಣೆ ಹಿನ್ನಲೆ, ಕಾಂಗ್ರೆಸ್ ಅಭ್ಯರ್ಥಿ ರಮೇಶ್ಬಾಬು ಇಂದು ರಾಜ್ಯದ ದೇವಮೂಲೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪ್ರಸಿದ್ದ ಕುರುಡುಮಲೆ ವಿನಾಯಕ ದೇಗುಲಕ್ಕೆ, ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ರು, ಅಭ್ಯರ್ಥಿ ರಮೇಶ್ಬಾಬು ರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಕೆ ಚಂದ್ರಾರೆಡ್ಡಿ, ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಹಾಗು ಹಲವು ಕೈ ನಾಯಕರು ಸಾಥ್ ನೀಡಿದ್ರು, ವಿನಾಯಕ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ರಮೇಶ್ಬಾಬು, ಈ ಬಾರಿಯ ಪರಿಷತ್ತ್ ಚುನಾವಣೆ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆ ದಿಕ್ಸೂಚಿಯಾಗಲಿದೆ ಎಂದ್ರು, ರಾಜ್ಯದಲ್ಲಿ ಆಡಳಿತ ನಡೆಸ್ತಿರುವ ಬಿಜೆಪಿ ಪಕ್ಷ ವೈಪಲ್ಯಗಳಿಂದ ರಾಜ್ಯದ ಅಭಿವೃದ್ದಿ ಕುಂಠಿತವಾಗಿದ್ದು, ಈ ಬಾರಿ ಆಗ್ನೇಯ ಪದವೀದರರ ಕ್ಷೇತ್ರದಲ್ಲಿ ಗೆಲುವು ನನ್ನದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು, ಇನ್ನು ರಾಜ್ಯದಲ್ಲಿ ಶಾಲೆ ಆರಂಭಿಸಬೇಕೊ, ಬೇಡವೋ ಎಂಬ ಗೊಂದಲಗಳು ಎದ್ದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಮೇಶ್ಬಾಬು, ಪಕ್ಷದ ತೀರ್ಮಾನವೇ ಅಂತಿಮ ಎಂದ್ರು, ಇನು ವಿದ್ಯಾಗಮ ಕಾರ್ಯಕ್ರಮ ವೈಪಲ್ಯಗಳಿಂದ ಕೂಡಿದ್ದು, ಮಕ್ಕಳಿಗೆ ಭೌತಿಕವಾಗಿ ಚೈತನ್ಯ ತುಂಬಲು ಸಹಕಾರಿಯಾಗಿಲ್ಲ, ಶಿಕ್ಷಕರನ್ನ ಯಾವುದೇ ಕಾರಣಕ್ಕು ಕೊರೊನಾ ಕಾರ್ಯಕ್ಕೆ ಬಳಸಬಾರದು ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ರು.

ವರದಿ-ವಿ ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು

Please follow and like us:

Related posts

Leave a Comment