ದೇವದುರ್ಗ ತಾಲೂಕ ವಿಭಜನೆ ವಿರೋಧಿಸಿ,ದಿ.14 ರಂದು ಜನಾಕ್ರೋಶ..!

ದೇವದುರ್ಗ: ದೇವದುರ್ಗ ತಾಲೂಕು ವಿಭಜನೆಯನ್ನು ಖಂಡಿಸಿ ಹಾಗೂ ಇನ್ನು ಇಪ್ಪತ್ತು ವರ್ಷಗಳ ಕಾಲ ಅಖಂಡ ದೇವದುರ್ಗ ತಾಲೂಕಾಗಿ ಮುಂದುವರೆಯಬೇಕೆಂದು ಪಕ್ಷಾತೀತವಾಗಿ ವಿವಿಧ ಸಂಘಟನೆಗಳೊಂದಿಗೆ ಅಕ್ಟೋಬರ್ 14 ರಂದು ಜನಾಕ್ರೋಶದ ರ್ಯಾಲಿ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಂಡ ದೇವದುರ್ಗ ತಾಲೂಕ ಐಕ್ಯ ಹೋರಾಟ ಸಮಿತಿ ಸಂಚಾಲಕರಾದ ಹನುಮಂತ ಕಾಕರಗಲ್ ಅವರು ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಸರ್ಕಾರವು ಈಗಾಗಲೇ ಅರಕೇರ ಚಿಕ್ಕ ಕಂದಾಯ ಗ್ರಾಮ ಹಾಗೂ ಮೂಲ ಸೌಕರ್ಯವಿಲ್ಲದ ಗ್ರಾಮ ಪಂಚಾಯತಿಯನ್ನು ಅವೈಜ್ಞಾನಿಕವಾಗಿ ಮತ್ತು ಕ್ಷೇತ್ರದ ಶಾಸಕರಾದ ಶಿವನಗೌಡ ನಾಯಕರು ಸ್ವಾರ್ಥ ಮತ್ತು ಅಧಿಕಾರದ ಪ್ರಭಾವ ಬಳಸಿ ಸಚಿವ ಸಂಪುಟದಲ್ಲಿ ಅರಕೇರ ನೂತನ ತಾಲೂಕು ಎಂದು ಘೋಷಣೆ ಮಾಡಿಸಿದ ಧೋರಣೆಯನ್ನು ನೀತಿ ವಿರೋಧಿಸಿದ ಅವರು ದೇವದುರ್ಗ ಕ್ಷೇತ್ರ ಹಿಂದುಳಿದ ತಾಲೂಕಾಗಿದ್ದು ಮತ್ತು ಶೈಕ್ಷಣಿಕವಾಗಿ ಆರ್ಥಿಕವಾಗಿ ಹಾಗೂ ಸರಕಾರಿ ಕಟ್ಟಡಗಳಿಲ್ಲದೆ ಅಧಿಕಾರಿಗಳ ವರ್ಗವು ಇಲ್ಲದೆ.ಸರಕಾರಿ ಜಾಗವಿದ್ದರೂ ಪಟ್ಟಣದಲ್ಲಿ ಸಾರ್ವಜನಿಕರಿಗೆ ಮೂತ್ರ ವಿಸರ್ಜನೆ ಮಾಡಲು ಸರಿಯಾದ ಶೌಚಾಲಯ ಇಲ್ಲದೆ ಕುಡಿಯುವ ನೀರು ಇಲ್ಲದೆ ಹಲವಾರು ಸಮಸ್ಯೆಗಳಿದ್ದು ಇವುಗಳನ್ನು ನಿಭಾಯಿಸಬೇಕಾದ ಶಾಸಕರು ಸ್ವಾರ್ಥ ರಾಜಕಾರಣಕ್ಕಾಗಿ ಅಖಂಡ ತಾಲೂಕನ್ನು ಒಡೆದಿರುವ ಶಾಸಕರ ವಿರುದ್ಧ ತಾಲೂಕಿನಾದ್ಯಂತ ಅತಿಹೆಚ್ಚಿನ ಜನಾಕ್ರೋಶ ವಿದ್ದು. ಬಹಿರಂಗವಾಗಿ ನೂತನ ತಾಲೂಕನ್ನು ವಿರೋಧಿಸಿದವರ ಮೇಲೆ ಪೊಲೀಸ್ ಇಲಾಖೆ ಮೂಲಕ ಪ್ರಕರಣ ದಾಖಲಿಸುವ ಹೆದರಿಕೆಗೆ ಹೆದರಿ ತಾಲೂಕಿನ ಜನರು ಬಹಿರಂಗ ಪ್ರತಿಭಟನೆಯಲ್ಲಿ ಭಾಗವಹಿಸಲು ಹಿಂದೆಟು ಹಾಕುತ್ತಿದ್ದಾರೆ, ಅಭಿವೃದ್ಧಿಯಲ್ಲಿ ಹಿಂದೆ ಇರುವ ತಾಲೂಕನ್ನು ವಿಭಜನೆ ಮಾಡಿದ ಘೋಷಣೆಯನ್ನು ಸರ್ಕಾರ ಹಿಂಪಡೆಯುವವರೆಗೆ ಅಖಂಡ ತಾಲೂಕು ಉಳಿವಿಗಾಗಿ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತದೆ ಎಂದರು. ಇನ್ನೂ ಈ ಸಂದರ್ಭದಲ್ಲಿ ಕಟ್ಟಿಮನಿ ರೈತ ಸಂಘ ತಾಲೂಕ ಅಧ್ಯಕ್ಷ ಮಲ್ಲಯ್ಯ, ವಾಲ್ಮೀಕಿ ಮಹಾಸಭಾ ಅಧ್ಯಕ್ಷ ರಂಗಪ್ಪ ಗೋಸಲ್ ,ಮೇಲಪ್ಪ ಭಾವಿಮನಿ, ಗೋವಿಂದರಾಜು ನಾಯಕ ತಾಲೂಕು ಪಂಚಾಯತ್ ಸದಸ್ಯ ಕೊತ್ತದೊಡ್ಡಿ. ಜಿ ಬಸವರಾಜ್ ನಾಯಕ ಮತ್ತೀತರು ಭಾಗವಹಿಸಿದ್ದರು.

ವರದಿ-ಸುರೇಶ್ ಭವಾನಿ ಎಕ್ಸ್ ಪ್ರೆಸ್ ನ್ಯೂಸ್ ದೇವದುರ್ಗ

Please follow and like us:

Related posts

Leave a Comment