ಸಾಲಕ್ಕೆ ಹೆದರಿ ಪ್ರಾಣ ಬಿಟ್ಟ ಬ್ಯಾಂಕ್ ಉದ್ಯೋಗಿ..!

ನಂಜನಗೂಡು: ಕಪಿಲಾ ನದಿಗೆ ಹಾರಿ ಒಬ್ಬಮಹಿಳೆ ಸಾವನ್ನಪ್ಪಿದ್ದು ಇಬ್ಬರು ಪ್ರಾಣಾಪಾಯಾದಿಂದ ಪರಾಗಿರುವ ಘಟನೆ ನಂಜನಗೂಡು ಪಟ್ಟಣದ ಮಲ್ಲನಮೂಲೆಯಲ್ಲಿ ನಡೆದಿದೆ. ಮೈಸೂರಿನ ಜೆಎಸ್ಎಸ್ ಲೇಔಟ್ ನಿವಾಸಿಗಳಾದ60 ವರ್ಷದ ಅಕ್ಕಮ್ಮ, 10 ವರ್ಷದ ಮಿಂಚು, ಬದುಕುಳಿದಿದ್ದು 35 ವರ್ಷದ ರಶ್ಮಿ ಎಂಬಾಕೆ ಸಾವನ್ನಪ್ಪಿದ್ದಾರೆ. ರಶ್ಮಿ ಬ್ಯಾಂಕ್ ಉದ್ಯೋಗಿಯಾಗಿದ್ದು ಸುಮಾರು 50 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬುವುದು ಸಂಬಂಧಿಕರ ಮಾತಾಗಿದೆ. ಸಾಲದಿಂದ ಮನೆಯಲ್ಲಿ ದಿನನಿತ್ಯ ಕೌಟುಂಬಿಕ ಕಲಹ ನಡೆಯುತ್ತಿತ್ತು, ಇದರಿಂದ ಮನನೊಂದು ನಂಜನಗೂಡಿನ ಕಪಿಲಾ ನದಿಯಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ಆಕೆಯ ಸಂಬಂಧಿಕರಾದ ಜೀವನ್ ಸಂದರ್ಭದಲ್ಲಿ ತಿಳಿಸಿದರು. ಈ ಸಂಬಂಧ ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಬದುಕಿರುವ ಇಬ್ಬರು ಮಹಿಳೆಯರನ್ನು ಮೈಸೂರಿನ ದೊಡ್ಡಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ಸಾವನಪ್ಪಿರುವ ಬ್ಯಾಂಕ್ ಉದ್ಯೋಗಿ ರಶ್ಮಿಯ ಮೃತದೇಹವನ್ನು ನಂಜನಗೂಡಿನ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ವರದಿ-ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Please follow and like us:

Related posts

Leave a Comment