ಹುಟ್ಟು ಸಾವುಗಳ ಮದ್ಯ ಸಮಾಜಕ್ಕೆ ನೀಡುವಂತಹ ಕೊಡುಗೆಗಳು ಆಪಾರವಾದದ್ದು-ಡಾ.ಸುಜಾತ ರಾಥೋಡ್..!

ಪಾವಗಡ 125ವರ್ಷಗಳ ಹಿಂದೆ ಪ್ರಾರಂಭವಾದ ಮಿಂಟೋ ಕಣ್ಣಿನ ಆಸ್ಪತ್ರೆ ವಿಭಾಗೀಯ ಕಣ್ಣಿನ ಕೇಂದ್ರ ಎಂದು ಇಡೀ ದೇಶದಲ್ಲಿ ಏಳನೇ ಕೇಂದ್ರ ಎಂದು ಜಗತ್ಪ್ರಸಿದ್ಧ ವಾಗಿದ್ದು ಆಸ್ಪತ್ರೆಯ 125 ನೇ ವರ್ಷದ ಆರಂಭೋತ್ಸವವನ್ನು ಪಾವಗಡ ಶ್ರೀ ಶಾರದದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಇನ್ನು ಮುಂದೆ ಜಂಟಿಯಾಗಿ ನೇತ್ರ ಚಿಕಿತ್ಸೆ ಯೋಜನೆಗಳನ್ನು ಸಮಸ್ತ ಗ್ರಾಮಾಂತರ ಜನರಿಗೆ ಒಳಿತಾಗಲಿ ಎನ್ನವ ಉದ್ದೇಶ ದಿಂದ ಆರಂಬಿಸಲಾಗುತ್ತಿದೆ ಎಂದು ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತ ರಥೋಡ್ ತಿಳಿಸಿದರು. ತಾವು ಮಿಂಟೋ ಕಣ್ಣಿನ ಆಸ್ಪತ್ರೆ 125ನೇ ವರ್ಷದ ಪ್ರಾರಂಭೋತ್ಸವ ಒಂದು ಅರ್ಥಗರ್ಭಿತವಾಗಿ ಹಾಗೂ ದೇಶಕ್ಕೆ ಸಹಾಯವಾಗುವಂತಹ ಯೋಜನೆಯನ್ನು ಕೈಗೆತ್ತಿಕೂಳ್ಳಬೇಕೆಂದು ಚಿಂತಿಸುತ್ತಿರುವಾಗ ಭಗವಂತನ ಕಳುಹಿಸಿದ ರೀತಿಯಲ್ಲಿ ಪಾವಗಡದ ಸ್ವಾಮಿ ಜಪಾನಂದಜಿಯವರನ್ನು ನಮ್ಮೊಂದಿಗೆ ಕೈಜೋಡಿಸಿದ್ದಾರೆ.ನಂತರ ಸ್ವಾಮಿ ಜಪಾನಂಜೀ ರವರು ಮಾತನಾಡಿ ಅನೇಕ ವರ್ಷಗಳ ಕನಸು ಇಂದು ನನಸಾಗಿದೆ ಇಡೀ ದೇಶದಲ್ಲಿಯೇ ಇರುವ ಏಳು ನೇತ್ರ ವಿಭಾಗೀಯ ಕೇಂದ್ರಗಳಲ್ಲಿ ಒಂದಾಗಿರುವ ಮಿಂಟೋ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಇನ್ನು ಮುಂದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರಿಗೆ ನೇತ್ರ ಚಿಕಿತ್ಸೆ ಸೌಲಭ್ಯಗಳನ್ನು ನೀಡಲು ಅತೀವ ಸಹಾಯ ಈ ಸಂಯುಕ್ತಶ್ರಯದಿಂದ ಉಂಟಾಗಿದೆ ಎಂದು ತಿಳಿಸಿದರು. ಪಾವಗಡದಲ್ಲಿ ಸರಿಸುಮಾರು ಮೂವತ್ತು ಸಾವಿರ ನೇತ್ರ ಚಿಕಿತ್ಸೆಯನ್ನು ಹಾಗೂ 150 ಮಕ್ಕಳಿಗೆ ಸಂಪೂರ್ಣವಾಗಿ ಉಚಿತವಾಗಿ ಕಣ್ಷಿನ ಚಿಕಿತ್ಸೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ವೈದ್ಯ ಅಧಿಕಾರಿ ಡಾ.ನಾಗೇಂದ್ರಪ್ಪ.ಡಾ.ವೆಂಕಟರಾಮಯ್ಯ.ಡಾ.ಚೇತನ. ತಾಲ್ಲೂಕು ಆರೋಗ್ಯಧಿಕಾರಿ ತಿರುಪತಯ್ಯ ಡಾ.ಕಿರಣ್, ಮಿಂಟೋ ಆಸ್ಪತ್ರೆ ಡಾಸುಬ್ರಮಣ್ಯಂ, ಡಾ.ಹರೀಶ್, ಶೋಭ, ಜಯಶ್ರೀ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ- ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ

Please follow and like us:

Related posts

Leave a Comment