ಆಂಧ್ರದ ಗಡಿಭಾಗಗಳಿಗೆ ಮಧ್ಯದಂಗಡಿ ವರ್ಗಾವಣೆ- ನಾರಾಯಣ ಗೌಡ ಆರೋಪ..!

ಮುಳಬಾಗಿಲು: ಅಬಕಾರಿ ಸಚಿವ ಎಚ್ ನಾಗೇಶ್ ಅವರ ತವರು ಕ್ಷೇತ್ರ, ಮುಳಬಾಗಿಲು ತಾಲೂಕಿನಲ್ಲಿ, ಆಂದ್ರದ ಮದ್ಯಪಾನಿಗಳನ್ನ ಸೆಳೆಯಲು, ಆಂಧ್ರದ ಗಡಿಗೆ ವರ್ಗಾವಣೆಯಾಗಿರುವ ಬಾರ್ ಅಂಡ್ ರೆಸ್ಟೋರೆಂಟ್ಗಳು, ಅಕ್ರಮವಾಗಿ ರೈತರ ಜಮೀನುಗಳಲ್ಲಿ ತಲೆ ಎತ್ತಿದೆ,ಎಂದು ರೈತ ಸಂಘದ ಮುಖಂಡ ನಾರಾಯಣಗೌಡ ಆರೋಪಿಸುತ್ತಿದ್ದಾರೆ. ಜೊತೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಸರ್ವೇ ನಂಬರ್ಗಳಲ್ಲಿ ಮಾತ್ರ ಬಾರ್ ಸ್ಥಾಪಿಸಲು ಅವಕಾಶ ನೀಡಬೇಕಾಗಿದ್ದು, ಆದರೆ ಅಧಿಕಾರಿಗಳು, ಪಿ ನಂಬರ್ ಹಾಗು ಖರದಾ ಭೂಮಿಯಲ್ಲಿ ಬಾರ್ ತೆರೆಯಲು ಅನುಮತಿ ನೀಡಿದ್ದಾರೆ, ಇದಕ್ಕೆ ಪುಷ್ಟಿ ನೀಡುವಂತೆ ಅಧಿಕಾರಿಗಳು ಕೆಲ ಬಾರ್ಗಳ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆಂದು ತಿಳಿದುಬಂದಿದ್ದು, ಭೂಮಿ ಪರಿವರ್ತನೆ ಆಗದಿರುವ ಜಮೀನಿನಲ್ಲಿ ಬಾರ್ ಸ್ಥಾಪನೆಗೆ ಅಬಕಾರಿ ಇಲಾಖೆ ಅಧಿಕಾರಿಗಳೇ ಸಹಕಾರ ನೀಡಿರುವ ಆರೊಪಗಳು ಕೂಡ ಕೇಳಿಬಂದಿದೆ. ಈಗಾಗಲೇ ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳಲು ಮನವಿ ನೀಡಲಾಗಿದೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳದೆ ಹೋದರೆ ಜಿಲ್ಲಾಡಳಿತ ವಿರುದ್ದ ಹೊರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ವರದಿ-ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು

Please follow and like us:

Related posts

Leave a Comment