ವಿಜಯಪುರ: ಭಾರತಿ ಸೇನಾ ಪಡೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರೂರಿಗೆ ಬಂದ ಯೋಧನಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಸೈನಿಕ ಅಮೀರ ಚಂದ ಅಲ್ಲಾವುದ್ದೀನ್ ಜಕಾತದಾರ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಂಜುಟಗಿ ಗ್ರಾಮದವರಾಗಿದ್ದು, ಇವರನ್ನ ಅಂಜುಟಗಿ ಗ್ರಾಮಸ್ಥರು ವಿಶೇಷ ಸ್ವಾಗತ ಮಾಡಿಕೊಂಡರು. ತಾಲೂಕಿನ ಅಂಜುಟಗಿ ಗ್ರಾಮದ ಅಲ್ಲಾವುದ್ದೀನ್ ಪುತ್ರ ಅಮೀರಚಾಂದ ದಿನಾಂಕ 25/11/2003 ರಂದು ಭಾರತೀಯ ಸೇನೆಯಲ್ಲಿ ಭರ್ತಿಯಾಗಿ ಕರ್ನಾಟಕದ ಬೆಳಗಾವಿ ಜಿಲ್ಲೆಯಿಂದ ತಮ್ಮ ಸೇವೆ ಪ್ರಾರಂಭ ಮಾಡಿ ಸಿಕಂದರಾಬಾದ್, ಮಣಿಪುರ, ಜಮ್ಮು ಕಾಶ್ಮೀರ, ಪೊಚ್ ಸೆಕ್ಟರ್, ಕೃಷ್ಣಾ ಘಾಟ್, ಬಾಂದಿಪೂರ, ಪಂಜಾಬ್, ಗುಜರಾತ್ ಹಾಗೂ ಜಮ್ಮು ಕಾಶ್ಮೀರ ದ ದ್ರಾಸ್ ಸೆಕ್ಟರ್ ಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ್ದು ಗ್ರಾಮಸ್ಥರು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸುವ ಮೂಲಕ ಸ್ವಾಗತ ಕೋರಿದರು.ವೇದಿಕೆ ಜಿಲ್ಲಾಧ್ಯಕ್ಷ ಅಣ್ಣಾರಾಯ ಬಬಲಾದ ಮಾತನಾಡಿ, ದೇಶದೊಳಗೆ ನಾವು ನೆಮ್ಮದಿಯಿಂದ…
Read MoreCategory: ವಿಜಯಪುರ
ಸರಕಾರಿ ವಾಹನ ಮನೆ ಕೆಲಸಕ್ಕೆ ಬಳಕೆ- ಗ್ರಾಮಸ್ಥರಿಂದ ಅಧಿಕಾರಿಗಳ ವಿರುದ್ಧ ಆಕ್ರೋಶ..!
ವಿಜಯಪುರ: ಸಾರ್ವಜನಿಕ ಕೆಲಸಗಳನ್ನು ಸಲೀಸಾಗಿ ನಿರ್ವಹಿಸಲೆಂದು 24/7 ನೀಡಿರುವ ಸರಕಾರಿ ವಾಹನವನ್ನು ಕಛೇರಿ ಕೆಲಸ ಕಾರ್ಯಗಳಿಗೆ ಬಳಸದೇ ತಮ್ಮ ಖಾಸಗಿ ಹಾಗೂ ಕುಟುಂಬದ ಕೆಲಸಕ್ಕೆ ಕಾರ್ಯಗಳಿಗೆ ಬಳಕೆ ಮಾಡುತ್ತಿರುವುದು ಇಂಡಿ ತಾಲ್ಲೂಕಿನ ವಿದ್ಯತ್ ಸರಬರಾಜು ಕಛೇರಿಯಲ್ಲಿ ಕಂಡು ಬಂದಿದ್ದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಉಪ ವಿಭಾಗ ಇಂಡಿಯ ಕಛೇರಿಗೆ ನೀಡಿರುವ 24/7 ಗೂಡ್ಸ ವಾಹನವನ್ನು ಅಧಿಕಾರಿಗಳು ತಮ್ಮ ವಯ್ಯಕ್ತಿಕ ಹಾಗೂ ಕುಟುಂಬದ ಕೆಲಸ ಕ್ಕೆ ಬಳಕೆ ಮಾಡುತ್ತಿದ್ದಾರೆ. ಇನ್ನಾದರೂ ಸರ್ಕಾರಿಯ ವಾಹನಗಳನ್ನು ಸರಕಾರಿ ಕೆಲಸಕ್ಕೆ ಮಾತ್ರ ಬಳಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ಕಿಡಿಕಾರಿದರು. ಸರಕಾರದ ವಾಹನವನ್ನು ಅಧಿಕಾರಿಗಳು ತಮ್ಮ ಖಾಸಗಿ ಐಷರಾಮಿ ಬದುಕಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಮೇಲಿಂದ ಮೇಲೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದರೂ,…
Read Moreಚುನಾವಣೆ ಅಧಿಕಾರಿ ಇಲ್ಲದೇ ಗೊಂದಲದ ಗೂಡಾದ ನಾಮಪತ್ರ ಸಲ್ಲಿಕೆ.!
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕು ಕಾರ್ಯಕಾರಿ ಸಮಿತಿ ಚುನಾವಣೆ ನಾಮ ಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು ನಾಮ ಪತ್ರ ಸ್ವೀಕಾರ ಮಾಡಬೇಕಿದ್ದ ಚುನಾವಣೆ ಅಧಿಕಾರಿ ನಾಪತ್ತೆಯಾಗಿದ್ದಾರೆ. ಎಂದು ತಾಲ್ಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷ ಎಸ್ ಆರ್ ಪಾಟೀಲ್ ದೂರಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕ ಸಂಘದ (ರಿ) ಬೆಂಗಳೂರು ಇವರ ಸೂಚನೆಯಂತೆ ೨೦೨೦ – ೨೫ ನೇ ಸಾಲಿನ ೫ ವರ್ಷದಗಳ ಅವಧಿಗಾಗಿ ಶಿಕ್ಷಕರ ಸಂಘದ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಇಂಡಿ ತಾಲ್ಲೂಕಿನ ಅಂಜುಮನ್ ಪ್ರೌಢಶಾಲೆಯನ್ನು ಚುನಾವಣಾ ಕಛೇರಿಯಾಗಿ ರೂಪಿಸಲಾಗಿತ್ತು. ಚುನಾವಣೆ ಅಧಿಕಾರಿಯಾಗಿ ಶ್ರೀ ಜಮಾದಾರ ಎಂಬುವರನ್ನು ನೇಮಕ ಮಾಡಲಾಗಿತ್ತು. ಆದರೆ ದಿನಾಂಕ ೨೮ -೧೧-೨೦೨೦ ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ನಾಮ ಪತ್ರ ಸಲ್ಲಿಕೆ ಆಗಮಿಸಿದ್ರೆ ಚುನಾವಣೆ ಕಛೇರಿಗೆ ಬೀಗವಿದೆ. ಸ್ಥಳದಲಿ ಚುನಾವಣೆ ಅಧಿಕಾರಿಯೂ ಇಲ್ಲ, ಚುನಾವಣೆ ಮುಂದೂಡಿದ ಬಗ್ಗೆ ಮಾಹಿತಿಯೂ ಇಲ್ಲ.…
Read Moreಅಮಾಯಕ ಹೋರಾಟಗಾರರ ಮೇಲೆ ಪೋಲಿಸರ್ ದಬ್ಬಾಳಿಕೆ..!
ವಿಜಯಪುರ: ಕಲ್ಬುರ್ಗಿ ಜಿಲ್ಲಾ ಅಧಿಕಾರಿಗಳ ಕಛೇರಿಯ ಮುಂಬಾಗದಲ್ಲಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಕ್ಕಾಗಿ ಸುಮಾರು 86 ದಿನಗಳ ಕಾಲ ನಿರಂತರ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿರುವ ತಳವಾರ & ಪರಿವಾರ ಸಮುದಾಯದ ಜನರ ಮೇಲೆ ಪೋಲಿಸರ ದೌರ್ಜನ್ಯ ದಬ್ಬಾಳಿಕೆ ಹೆಚ್ಚುತ್ತಿದೆ. ಜೊತೆಗೆ ಅವಾಚ್ಯ ಪದಗಳಿಂದ ನಿಂದನೆ ಹಾಗೂ ಹೋರಾಟ ಹತ್ತಿಕುವ ಕೆಲಸ ಮಾಡುತ್ತಿದಿದ್ದು ಖಂಡನಿಯ ಎಂದು ತಳವಾರ & ಪರಿವಾರ ಯುವ ಸೈನ್ಯದ ಪದಾಧಿಕಾರಿಗಳು ವಿಜಯಪುರ ಜಿಲ್ಲಾ ಅಧಿಕಾರಿಗಳ ಕಛೇರಿಯ ಮುಂಬಾಗದಲ್ಲಿ ಪೋಲಿಸ್ ವಿಜಯಪುರ ಜಿಲ್ಲಾ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಪಾಲರಿಗೆ, ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಸಮುದಾಯದ ಯುವ ಮಖಂಡ ಸಾಯಬಣ್ಣ ಬಾಗೇವಾಡಿ ಸ್ಟೆಷನ್ ಬಾಜಾರ ಪೊಲಿಸ್ ಇಲಾಖೆ ಸಿ.ಪಿ.ಐ ಜೊತೆ ವಿಜಯಪುರ ಅಪಾರ ಜಿಲ್ಲಾಧಿಕಾರಿಗಳು ಸಮುದಾಯದ…
Read Moreಅರ್ಧಕ್ಕೆ ನಿಂತ ಕಾಮಗಾರಿ ಪುನಾರರಾಂಭ….!
ವಿಜಯಪುರ: ಪ್ರತಿ ನಿತ್ಯ ರಸ್ತೆಯ ಗೋಳು ಕೇಳುವರ್ಯಾರು? ಒಂದು ಕಡೆ ರಸ್ತೆಯ ಮಧ್ಯದಲ್ಲೇ ನಿಂತ ಮಳೆ ನೀರು, ಮತ್ತೊಂದು ಕಡೆ ಚರಂಡಿ ಕಾಮಗಾರಿ ಹೆಸರಲ್ಲಿ ನಿಂತ ಶೌಚಲಯದ ನೀರು, ಇನ್ನೊಂದು ಕಡೆ ಅಡ್ಡಾದಿಡ್ಡಿ ವಾಹನಗಳು ಸಾಲು ಇವೆಲ್ಲವೂ ಸುತ್ತ ಮುತ್ತ ಆವರಿಸಿ ರಸ್ತೆಯೇ ಮುಚ್ಚಿಕೊಂಡಿರುವ ಘಟನೆ ಇಂಡಿ ನಗರದ ಅಗರಖೇಡ ರಸ್ತೆಯಲ್ಲಿ ಎದುರಗಿತ್ತು.ಇದರ ಕುರಿತು ಎಕ್ಸ್ಪ್ರೆಸ್ ಸುದ್ದಿ ವಾಹಿನಿ ಸುದ್ದಿ ಪ್ರಸಾರ ಮಾಡಿತ್ತು. ವರದಿ ಗಮನಸಿ ಎಚ್ಚೇತ್ತುಗೊಂಡ ಅಧಿಕಾರಿಗಳು ಕಾಮಗಾರಿ ಮಾಡಲು ಮುಂದಾಗಿದ್ದಾರೆ. ಅದನ್ನು ಗಮನಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿಟ್ಟು ಉಸಿರು ಬಿಟ್ಟು ಎಕ್ಸ್ಪ್ರೆಸ್ ಸುದ್ದಿ ವಾಹಿನಿಗೆ ಧನ್ಯವಾದಗಳು ತಿಳಿಸಿದ್ದಾರೆ. ವರದಿ- ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ
Read Moreಯುವ ನಾಯಕರು ಬಹುಜನ ಸಮಾಜಕ್ಕೆ ಸೇರ್ಪಡೆ..!
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳದಲ್ಲಿ ಹಲವಾರು ಯುವ ನಾಯಕರು, ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿಯಾದ,ಶ್ರೀ ಕೆ, ಆರ್ ತೊರವಿ, ಬೆಳಗಾವಿ ವಿಭಾಗದ ಉಸ್ತುವಾರಿಗಳಾದ ಶ್ರೀಯಶವಂತ ಪೂಜಾರಿ, ಶ್ರೀ ರಾಜು ಮಾದರ ಹಾಗೂ ಜಿಲ್ಲಾ ಉಸ್ತುವಾರಿಳಾದ ಶ್ರೀ ಕೆ, ಬಿ, ದೊಡಮನಿ (ವಕೀಲರು )ಹಾಗೂ ತಾಲೂಕು ಕಾರ್ಯಕರ್ತರ ಸಮಕ್ಷಮದಲ್ಲಿ ಹಲವಾರು ಯುವ ನಾಯಕರು ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆಗೊಂಡರು, ಹಾಗೂ ಬಹುಜನ ಸಮಾಜ ಪಕ್ಷದ ತಾಲೂಕು ಸಮಿತಿಯನ್ನು ರಚನೆಯನ್ನು ಮಾಡಲಾಯಿತ್ತು,ಜಿಲ್ಲಾ ಸಂಯೊಜಕರನ್ನಾಗಿ ಶ್ರೀ ಪರಶುರಾಮ, ಬಸಪ್ಪ ಬಸರಕೊಡ, ಅಧ್ಯಕ್ಷರನ್ನಾಗಿ ಶ್ರೀ ಮುತ್ತುರಾಜ ಪರಮಪ್ಪ ತಳವಾರ,ಉಪ ಅಧ್ಯಕ್ಷರನ್ನಾಗಿ ಶ್ರೀ ಮಾರುತಿ ತಿಮ್ಮಣ ಸಿದ್ದಾಪುರ ಹಾಗೂ ಯಲ್ಲಪ್ಪ ಶ್ರೀಶೈಲ ಚಲವಾದಿ,ತಾಲೂಕು ಪ್ರಧಾನ ಕಾರ್ಯದರ್ಶಿಯನ್ನಾಗಿ ಶ್ರೀ ಅಬ್ದುಲ್ ವಾಜೀದ ಶೇ಼ಬ್ಬಿರ್ ಅಮ್ಮದ ಹಡಲಗೇರಿ, ಕಾರ್ಯದರ್ಶಿಗಳಾದ ಶ್ರೀ ಮಾಯಪ್ಪ ಭೀಮಪ್ಪ ಮಾದರ ,ಮೊಸೀನ್ ,ಕೆ.ಡವಳಗಿ, ಶ್ರೀ ಬೇಳೆಪ ಯಲ್ಲಪ್ಪ ಮಾದರ, ಖಜಾಂಚಿಯನ್ನಾಗಿ ಶ್ರೀ ಮಂಜುನಾಥ್…
Read Moreರೈತರ ಬೆಳೆಗೆ ನುಗ್ಗಿದ ಭೀಮೆ ನದಿಯ ನೀರು..!
ವಿಜಯಪುರ: ಕರ್ನಾಟಕ-ಮಹಾರಾಷ್ಟ್ರದ ಎಡಬಿಡದೆ ಸುರಿಯುತ್ತಿರುವ ಮಹಾ ಮಳೆಯಿಂದಾಗಿ ಹಾಗೂ ಉಜನಿ ಜಲಾಶಯದಿಂದ ಭೀಮಾ ನದಿಗೆ ಐದು ಲಕ್ಷ ಕ್ಯೂಸೇಕ್ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಇಂಡಿ ತಾಲ್ಲೂಕಿನ ಭೀಮಾತೀರದ ಗ್ರಾಮಗಳ ರೈತರ ಹೊಲ ಗದ್ದೆಗಳು ಹಾಗೂ ಮನೆಗಳಿಗೇಲ್ಲ ನದಿ ನೀರು ನುಗ್ಗಿ, ಮನೆಗಳು ಹಾಗೂ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ರೈತರು ಕಬ್ಬು ಹಾಗೂ ತೊಗರಿ ಬೆಳೆ ಹೆಚ್ಚಾಗಿ ಬೆಳೆಯುತ್ತಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಭೀಮೆಯ ಪ್ರವಾಹ ಮತ್ತೆ ಕಣ್ಣಿರಲ್ಲಿ ಕೈ ತೊಳೆಯುವಂತೆ ಮಾಡಿದೆ.ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಪಡನೂರ ಗ್ರಾಮದ ರತ್ನಾಕರ ಬಿರಾದಾರ ಮಾತಾನಾಡಿ ಮನೆಗಳಿಗೆ ನದಿ ನೀರು ನುಗ್ಗಿ, ಪತ್ರಾಸ್ ಸೇಡ್ ಗಳು ಜಲಾವೃತಗೊಂಡಿವೆ.ರೈತರ ಬಾಳೆ ಬೆಳೆ, ಕಬ್ಬು, ಜೋಳ ಸೇರಿದಂತೆ ಬೆಳೆಗಳು ಸದ್ಯ ಭೀಮೆಯ ಪ್ರವಾಹದ ನೀರಲ್ಲಿ ನಿಂತು ರೈತರ ಹಾಗೂ ಜನರ ಬದುಕು ದುಸ್ತರವಾಗುತ್ತಿದೆ.ಕೂಡಲೇ ಸಂಬಂಧಿಸಿದ ಇಲಾಖೆಯವರು ವಾಸ್ತವ ಹಾನಿ…
Read Moreಭೀಮಾತೀರದ ಗಡಿಯಾಂಚಿನ ಗ್ರಾಮಗಳು ಜಲಾವೃತ..!
ವಿಜಯಪುರ : ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಭೀಮಾತೀರದ ಗಡಿಂಚಿನ ಬಹುತೇಕ ಗ್ರಾಮಗಳು ಮಳೆಯಿಂದಾಗಿ ಉಕ್ಕಿ ಹರಿಯುತ್ತಿದ್ದು, ಜನರು ಮಹಾಮಳೆಗೆ ತತ್ತರಿಸಿ ಹೋಗಿದ್ದಾರೆ. ನದಿ ಪಾತ್ರದ ಗ್ರಾಮಗಳಲ್ಲಿರುವ ಜನರು ಮನೆ ಮಠ ಎಲ್ಲವೂ ಕಳದುಕೊಂಡು ಕಾಳಜಿ ಕೇಂದ್ರದಲ್ಲಿ ಆಶ್ರೆಯ ಪಡೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಬೇಟಿ ಮಾಡಿ ಸ್ವಾಂತನ ಹೇಳಿದ್ರೆ ಪ್ರಯೋಜನ ? ಅವರ ಬದುಕಿಗೆ ಆಶ್ರೆಯಾಗಬೇಕೆಂದು ತಾಲ್ಲೂಕಿನ ರೋಡಗಿ ಮತ್ತು ಮಿರಗಿ ಗ್ರಾಮದಲ್ಲಿ ಹಣ್ಣು ಹಂಪಲು ಜೊತೆಗೆ ದಿನಸಿ ಆಹಾರ ಕೀಟ್ ವಿತರಣೆ ಮಾಡಿ ಮಾನವಿಯತೆ ಮೆರೆದಿದ್ದಾರೆ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮಗೊಂಡ,ಉಪಸ್ಥಿತಿರು ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಬಿ.ಡಿ.ಪಾಟೀಲ್, ಮಾಜಿ ಪುರಸಭೆ ಸದಸ್ಯ ಸಿದ್ದು ಡಂಗಾ ಹಾಗೂ ಮೈಬೂಬ ಬೇವನೂರ. ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ
Read Moreಭಾರಿ ಮಳೆಗೆ ಜಲಾವೃತಗೊಂಡ ಭೀಮಾತೀರ..!
ವಿಜಯಪುರ: ಮುರ್ನಾಲ್ಕು ದಿನದಿಂದ ಬೆನ್ನು ಬಿಡದೆ ಮಳೆ ಸುರಿಯುತ್ತಿರವ ಹಿನ್ನೆಲೆ ಭಿಮಾ ನದಿ ನೀರಿನ ಮಟ್ಟ ದಿನೇ ದಿನೇ ಹೆಚ್ಚಳವಾಗುತ್ತಲಿದೆ. ನದಿ ಪಾತ್ರದ ಗ್ರಾಮಗಳು ಮುಳುಗಡೆಯ ಭೀತಿ ಎದುರಿಸುತ್ತಿವೆ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಳೆ ಆಗುತ್ತಿರುವುದರಿಂದ ಸೋನ್ನ ಬ್ಯಾರೆಜನಿಂದ ಲಕ್ಷಗಟ್ಟಲೇ ಕ್ಯೂಸೆಕ್ ನೀರು ಬಿಡಲಾಗ್ತಿದೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವಣಗಾಂವ ಗ್ರಾಮ ಅರ್ಧಭಾಗ ಜಲಾವೃತಗೊಂಡಿದೆ ಗ್ರಾಮದ ಸುತ್ತಮುತ್ತಲು ನೀರು ಆವರಿಸಿಕೊಂಡಿದೆ ಹನುಮಾನ ದೇವಸ್ಥಾನ, ಅಂಬಿಗರ ಚೌಡಯ್ಯ ದೇವಸ್ಥಾನ, ಗ್ರಾಮದ ಹಲವಾರು ಮನೆಗಳಲ್ಲಿ ನೀರು ತುಂಬಿವೆ ಇಂತಹ ಪ್ರವಾಹದ ಸಂದರ್ಭದಲ್ಲಿ ಆಂಜನೇಯ ದೇವಸ್ಥಾನದ ಪೂಜಾರಿ ಪೂಜೆ ಮಾಡಲು ದೇವಸ್ಥಾನಕ್ಕೆ ಈಜುಕೊಂಡು ಹೋಗಿ ಪೂಜೆ ಮಾಡಿಕೊಂಡು ಬಂದಿದ್ದು ವಿಶೇಷ ಇನ್ನು ನದಿ ಪಾತ್ರದ ಗ್ರಾಮಗಳಾದ ತಾರಾಪುರ ಕುಮಸಗಿ, ಕಡ್ಲೇವಾಡ, ಶೇಂಬೆವಾಡ ಗ್ರಾಮಗಳಿಗೆ ನೀರು ನೂಗಿದ್ದು ಪ್ರವಾಹದ ಬಿತಿ ಎದಿರುಸುತ್ತಿವೆ. ನದಿ ಸುತ್ತಮುತ್ತಲಿನ ಜನರು ತಮ್ಮ ಮನೆಗಳನ್ನು…
Read Moreಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಕರಕಲಾದ ಮನೆಯಲ್ಲಿದ್ದ ವಸ್ತುಗಳು..!
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಅನೇಕ ಮನೆಗಳು ನೆಲಸಮನಗೊಂಡಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿದ್ದು, ಮನೆಯವರು ಬೀದಿಗೆ ಬಿದ್ದಿದ್ದಾರೆ. ಇನ್ನೂ ಸ್ಥಳಕ್ಕೆ ಅಗ್ನಿ ಶಾಮಕದಳ ಬಂದಿದ್ದು ಬೆಂಕಿ ನಿಂದಿಸುವ ಪ್ರಯತ್ನ ಮಾಡಿದ್ದಾರೆ. ಇನ್ನೂ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ನಾಯಕ ಭೇಟಿ ನೀಡಿ ನೊಂದ ಕುಟುಂಬಕ್ಕೆ 10,000 ಧನ ಸಹಾಯ ಮಾಡಿ ಸಾಂತ್ವನ ಹೇಳಿದ್ದಾರೆ. ವರದಿ: ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ
Read More